ಕರ್ನಾಟಕದಲ್ಲಿ ಕುರಿ ಸಾಕಾಣಿಕೆ ಮತ್ತು ತಳಿಗಳು
60 ಲಕ್ಷಕ್ಕೂ ಅಧಿಕ ಕುರಿಗಳಿದ್ದು ಇವು ಮಲೆನಾಡು ಪ್ರದೇಶವನ್ನು ಹೊರತುಪಡಿಸಿ , ಪಶ್ಚಿಮ ಮತ್ತು ಉತ್ತರ ಕರ್ನಾಟಕದ 21 ರಿಂದ 25 C M ( ಅಂಗುಲ) ಮಳೆ ಬೀಳುವ ಬಯಲು ಪ್ರದೇಶದಲ್ಲಿ ಹೆಚ್ಚು ಸಾಕಾಣಿಕೆಯಲ್ಲಿವೆ . ನಮ್ಮ ಆಹಾರದಲ್ಲಿ ಇಂದು ಸಸಾರಜನಕದ ಅಭಾವ ಬಹಳಾ ಹೆಚ್ಚಾಗಿದ್ದು ಇದನ್ನು ಮಾಂಸ , ಹಾಲು , ಮೊಟ್ಟೆ , ಮೊದಲಾದ ಪ್ರಾಣಿ ಜನ್ಯ ಪದಾರ್ಥಗಳಿಂದ ಮತ್ತು ದ್ವಿದಳ ಧಾನ್ಯಗಳಿಂದಲೂ ಪಡೆಯಬಹುದಾಗಿದೆ , ಕರ್ನಾಟಕದಲ್ಲಿ ಕುರಿಸಾಕಾಣಿಕೆ ದಾರರ ಪೈಕಿ ಬಹಳ ಮಂದಿಯ ಉದ್ದೇಶ ಮಾಂಸ , ಚರ್ಮ , ಗೊಬ್ಬರ ಪಡೆಯುವ ಉದ್ದೇಶವೇ ಆಗಿದೆ ಅದರ ಹೊರತಾಗಿ ಉಣ್ಣೆ ಉತ್ಪಾದನೆಯಲ್ಲಿ ಹೆಚ್ಚಿನ ಗಮನವಿಲ್ಲವೆಂದು ಹೇಳಬಹುದು
ಆದಾಗ್ಯೂ ನಮ್ಮ ಕರ್ನಾಟಕ ರಾಜ್ಯ ಉಣ್ಣೆಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು . ಕರ್ನಾಟಕ ರಾಜ್ಯದಲ್ಲಿ 1000 ಕ್ಕೂ ಅಧಿಕ ಉಣ್ಣೆ ನೇಯ್ಗೆಯ ಕೈಮಗ್ಗಗಳಿದ್ದು ಅವು ಹೆಚ್ಚು ಮೈಸೂರು , ಹಾಸನ , ಚಿತ್ರದುರ್ಗ , ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಂಡುಬರುತ್ತವೆ ಈ ಉಣ್ಣೆಯಿಂದ ಕೇವಲ ಹೊದಿಕೆ ಮತ್ತು ಹಾಸುಗಂಬಳಿ ಗಳನ್ನೂ ತಯಾರಿಸುತ್ತಾರೆ .
ಕರ್ನಾಟಕದಲ್ಲಿ ಕುರಿಗಳನ್ನು ಸಾಮಾನ್ಯವಾಗಿ ಉತ್ತಮ , ಮಧ್ಯಮ ಮತ್ತು ಕನಿಷ್ಠ ತರಗತಿಯ ಉಣ್ಣೆಯನ್ನು ಕೊಡುವ 3 ಭಾಗಗಳಲ್ಲಿ ಹಾಗು ಅವು ಕೊಡುವ ಉಣ್ಣೆಯ ಆದರದ ಮೇಲೆ ವಿಂಗಡಣೆ ಮಾಡಲಾಗುತ್ತದೆ ಮತ್ತು ಕುರಿಗಳ ಪ್ರದೇಶ ಹಾಗು ಅವುಗಳ ಬಾಹ್ಯ ಮತ್ತು ಮುಖಲಕ್ಷಣಗಳ ಆದರದ ಮೇಲೆ ವಿಂಗಡಣೆ ಮಾಡುವ 4 ನೇ ವಿದಾನವು ಇದೆ . ಕರ್ನಾಟಕದಲ್ಲಿ ಕಂಡುಬರುವ ಮುಖ್ಯ ತಳಿಗಳೆಂದರೆ . ಡೆಕ್ಕನಿ , ಬಳ್ಳಾರಿ , ಹಾಸನ , ಹಾಗು ಬನ್ನೂರು ಕುರಿಗಳೆಂದು ಹೇಳಬಸಹುದು .
ಡೆಕ್ಕನಿ ಕುರಿಗಳು
ಇವು ಸಾಮಾನ್ಯವಾಗಿ ಮದ್ಯಮ ಗಾತ್ರದ ಕುರಿಗಳು , ಇವುಗಳ ಬಣ್ಣ ಕಪ್ಪಗಿದ್ದು ಬಿಳಿಮಚ್ಚೆಗಳಿಂದ ಕೂಡಿರುತ್ತವೆ . ಇವುಗಳಿಂದ ದೊರೆಯುವ ಉಣ್ಣೆಯು ಕಪ್ಪು ಬಣ್ಣದ್ದಾಗಿದ್ದು ಕೀಳು ದರ್ಜೆಯ ಉಣ್ಣೆಯಾಗಿ ಪರಿಗಣಿಸಲಾಗುತ್ತದೆ , ಇದು ಕೇವಲ ಒರಟಾದ ಹೊಡೆಗಂಬಳಿ ಹಾಗು ಹಾಸುಗಂಬಳಿಗಳ ತಯಾರಿಕೆಗೆ ಉಪಯುಕ್ತವಾಗಿರುತ್ತದೆ , ಈ ಕುರಿಗಳ ಉಣ್ಣೆಯಿಂದ ನಯವಾದ ಬಟ್ಟೆಯನ್ನು ತಯಾರುಮಾಡಲಾಗುವುದಿಲ್ಲ ,. ಈ ಕುರಿಗಳ ತಲೆ , ಎದೆ , ಹೊಟ್ಟೆಯ ಮೇಲೆ ಹಾಗು ಕಾಲುಗಳ ಮೇಲೆ ಉಣ್ಣೆ ಬೆಳೆಯುವುದಿಲ್ಲ , ಈ ಜಾತಿಯ ಕುರಿಗಳಿಂದ ಒಂದು ವರ್ಷಕ್ಕೆ ಎರಡು ಬಾರಿ ಉಣ್ಣೆಯನ್ನು ಕತ್ತರಿಸಬಹುದಾಗಿದೆ , ಒಂದು ಕುರಿಯು ವರ್ಷಕ್ಕೆ 400ರಿಂದ 500 ಗ್ರಾಂ ಉಣ್ಣೆಯನ್ನು ಕೊಡುತ್ತದೆ , ಈ ಕುರಿಗಳು ವರ್ಷಕ್ಕೆ ಒಂದು ಮರಿಯನ್ನು ಕೊಡುತ್ತದೆ , ಇವುಗಳ ಮೂಗಿನ ಮುಂಬಾಗ ಮೊನಚಾಗಿದ್ದು ತುದಿಯಲ್ಲಿ ಸ್ವಲ್ಪ ಬಾಗಿರುತ್ತದೆ , ಇದಕ್ಕೆ ರೋಮನ್ ಮೂಗು ಎಂದು ಕರೆಯುತ್ತಾರೆ . ಮುಖದಮೇಲೆ ಹೊಳಪಿನಿಂದ ಕೂಡಿದ್ದು ಕಪ್ಪು ಬಣ್ಣದ ಸಣ್ಣ ಸಣ್ಣ ಕೂದಲುಗಳು ಬೆಳೆದುಕೊಂಡಿರುತ್ತವೆ ಹಾಗು ಕಣ್ಣುಗಳು ಕಾಂತಿಯುಕ್ತವಾಗಿರುತ್ತವೆ .
ಕಿವಿಗಳು ಮದ್ಯಮ ಆಕಾರದಲ್ಲಿದ್ದು ಕೆಳಗೆ ಬಗ್ಗಿರುತ್ತವೆ . ಇವುಗಳ ಮೇಲೆ ಕೂದಲುಗಳು ಬೆಳದಿರುವುದಿಲ್ಲ, ಟಗರಿನ ಕೊಂಬುಗಳು ಸುರುಳಿಯಾಕಾರದಲ್ಲಿ ತಿರುವಿಕೊಂಡು ಹೊರಬಾಗಕ್ಕೆ ಸ್ವಲ್ಪ ಬಾಗಿಕೊಂಡಿರುತ್ತವೆ , ಹೆಣ್ಣು ಕುರಿಗಳಿಗೆ ಕೊಂಬುಗಳು ಇರುವುದಿಲ್ಲ , ಕಾಲಿನ ಗೊರಸು ಕಪ್ಪಾಗಿರುತ್ತವೆ . ತುಪ್ಪಟದ ಒಳ- ಮೈ ಬಣ್ಣ ಬಿಳಿಯದಾಗಿರುತ್ತದೆ . ಕುರಿಗಳ ಚರ್ಮದಲ್ಲಿ ಸೆಬೇಸಿಯಸ್ ಗ್ರಂಥಿಗಳು ತುಂಬಿಕೊಂಡಿರುತ್ತವೆ . ಈ ಗ್ರಂಥಿಗಳು ಜಿಡ್ಡಾದ ಎಣ್ಣೆಯಂತಹ ವಸ್ತುವನ್ನು ಉತ್ಪಾದಿಸುತ್ತವೆ. ಈ ಜಿಡ್ಡಾದ ವಸ್ತುವು ಉಣ್ಣೆಯು ಒಣಗದಂತೆಯೂ ನಯವಾಗಿರುವಂತೆಯೂ ಹುಲುಸಾಗಿ ಬೆಳೆಯುವಂತೆಯೂ ಕಾಪಾಡುತ್ತದೆ . ಇವುಗಳ ಬಾಲ ಸಣ್ಣದಾಗಿದ್ದು ಕುತ್ತಿಗೆ ಗಿಡ್ಡಗಿದ್ದು ತಲೆಯು ಸ್ವಲ್ಪ ಮೇಲಕ್ಕೆ ಎದ್ದಿರುತ್ತದೆ .ಎದೆಯು ಅಗಲವಾಗಿರುತ್ತದೆ . ಕಾಲುಗಳು ತೆಳುವಾಗಿ ಉದ್ದವಾಗಿರುತ್ತವೆ . ಟಗರಿನ ತೂಕ 70 ರಿ0ದ 80 ಪೌಂಡ್ ಕುರಿಯ ತೂಕ 40ರಿಂದ 50 ಪೌಂಡ್ ಇರುತ್ತದೆ . ಇವು ತೂಕದಲ್ಲಿ ಕಡಿಮೆ ಇರುವುದರಿಂದ ಒಂದು ಕುರಿಯಲ್ಲಿ ಮಾಂಸವು 10 ರಿಂದ 12 ಕೆಜಿ ಮಾತ್ರ ಇರುತ್ತದೆ ಡ್ರೆಸ್ಡ್ ಕ್ಯಾರಕಸ್ ( ಚರ್ಮ ಸುಲಿದು ಉಳಿದ ಮಾಂಸ ) 45% ಮಾಂಸವಿರುತ್ತದೆ .ಕುರಿಗಳು ಒಂದು ವರ್ಷದ ವಯಸ್ಸಿಗೆ ಗರ್ಭ ಧರಿಸುವ ಸಾಮರ್ಥ್ಯವನ್ನು ಪಡೆಯುತ್ತವೆ . ಬಾಲವು ಸಣ್ಣದಾಗಿದ್ದು ಸುಮಾರು 3 1/2 ಅಂಗುಲದಷ್ಟು ಉದ್ದವಿರುತ್ತದೆ . ಕುರಿಗಳ ಹಿಂಡನ್ನು ಕುರಿಗಾಹಿಗಳು ಹುಲ್ಲುಗಾವಲಿನಲ್ಲಿ ಹಾಗು ಅಡವಿ ಗಳಲ್ಲಿ ಮೇಯಿಸುವುದು ಸಾಮಾನ್ಯ ಪದ್ಧತಿ . ಇವು ಶರೀರ ಸಾಮರ್ಥ್ಯದಿಂದ ಬಹಳ ಗಟ್ಟಿಯಾಗಿರುತ್ತವೆ ಮತ್ತು ಆಯಾಸವಿಲ್ಲದೆ ಬಹಳ ದೂರ ದಾರಿ ತಿರುಗಾಡಬಲ್ಲ ಮತ್ತು ಮೇಯುತ್ತಾ ಬಿಸಿಲಿನ ತಾಪ ಹಾಗು ಚಳಿ – ಗಾಳಿಯನ್ನು ಸಹಿಸುವ ಶಕ್ತಿಯನ್ನು ಹೊಂದಿರುತ್ತವೆ
ಬಳ್ಳಾರಿ ಕುರಿಗಳು .
ಈ ಜಾತಿಯ ಕುರಿಗಳು ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಕಾಣಿಕೆಯಲ್ಲಿ ಕಂಡುಬರುತ್ತವೆ . ಇವು ಸಹ ಡೆಕ್ಕನಿ ಕುರಿಗಳಂತೆ ಒರಟಾದ ಕೀಳು ದರ್ಜಯ ಕೂದಲುಗಳಿಂದ ಕೂಡಿರುತ್ತವೆ . ಕಪ್ಪು ಬಣ್ಣದ ಉಣ್ಣೆಯನ್ನು ಕೊಡುತ್ತದೆ. ಕಂಬಳಿಗಳನ್ನು ಮಾತ್ರ ತಯಾರುಸುಲು ಇದರ ಉಣ್ಣೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ ಸಾದಾರಣವಾಗಿ ಈ ಕುರಿಗಳು ಸಾಮಾನ್ಯ ನಿಲುವು ಉಳ್ಳವಾಗಿರುತ್ತವೆ . ಮುಖ ಮತ್ತು ದೇಹ ಕಪ್ಪು ಬಣ್ಣದಿಂದ ಕೂಡಿರುತ್ತವೆ . ಕಾಲುಗಳು ಡೆಕ್ಕನಿ ಕುರಿಗಳಿಗಿಂತ ಉದ್ದವಾಗಿ ಎತ್ತರವಾಗಿರುತ್ತವೆ ಕಣ್ಣುಗುಡ್ಡೆಗಳು ಸ್ವಲ್ಪ ಉಬ್ಬಿಕೊಂಡು ಮುಂದಕ್ಕೆ ಚಾಚಿಕೊಂಡಿರುತ್ತವೆ . ಕಿವಿಗಳು ಉದ್ದವಾಗಿ ಜೋಲುಬಿದ್ದಿರುತ್ತವೆ ಮುಖ ಮತ್ತು ಕಿವಿಗಳು ಮೇಲೆ ಸಣ್ಣದಾದ ಮಿಂಚಿನಿಂದ ಕೂಡಿದ ಕೂದಲುಗಳು ಬೆಳೆದುಕೊಂಡಿರುತ್ತವೆ . ಸಾಮಾನ್ಯವಾಗಿ ಟಗರುಗಳಿಗೆ ಕೊಂಬುಗಳಿದ್ದು ಕೆಲವಕ್ಕೆ ಇಲ್ಲದಿರಲೂಬಹುದು . ದೇಹವು ಸಾದಾರಣವಾಗಿ ಸ್ವಲ್ಪ ಹೆಚ್ಚು ಉದ್ದವಾಗಿರುತ್ತವೆ . ಬಾಲ ಗಿಡ್ಡವಾಗಿರುತ್ತದೆ . ಈ ಕುರಿಗಳು ದೂರದ ಹುಲ್ಲುಗಾವಲುಗಳಿಗೆ ಹೋಗಿ ಮೇಯಲು ತಕ್ಕವುಗಳಾಗಿವೆ . ಈ ತಳಿಯ ಕುರಿಗಳು 1ರಿಂದ 1 1/2 ವರ್ಷ ವಯಸ್ಸಿಗೆ ಮರಿಗಳನ್ನು ಹಾಕುತ್ತವೆ .
ಇವುಗಳ ಬೆಳವಣಿಗೆಯು ತಮ್ಮ ಸ್ವಂತ ಸ್ಥಳಗಳಲ್ಲಿ ಮಾತ್ರ ಚನ್ನಾಗಿ ಆಗುತ್ತದೆ . ಇವುಗಳ ಬೆಳವಣಿಗೆ ಪರಸ್ಥಳಗಳಲ್ಲಿ ಅಷ್ಟಾಗಿ ಸಮರ್ಪಕವಾಗಿರುವುದಿಲ್ಲ . ಟಗರಿನ ಸರಾಸರಿ ತೂಕ 110 ರಿಂದ 120 ಪೌಂಡ್ ಇರುತ್ತದೆ . ಕುರಿಗಳ ತೂಕ 70 ರಿಂದ 80 ಪೌಂಡ್ ಇರುತ್ತದೆ . ಒಂದು ಕುರಿ ವರ್ಷಕ್ಕೆ 1.57 ಪೌಂಡಿನವರೆಗೂ ಉಣ್ಣೆಯನ್ನು ಕೊಡುತ್ತದೆ ಚರ್ಮ ಸುಲಿದ ಮಾಂಸದ ತೂಕ ಶರೀರದ ತೂಕದ ಶೇಕಡಾ ೪೦ ರಷ್ಟು ಇರುತ್ತದೆ .ಇವುಗಳಲ್ಲಿ ಕೊಂಬು ಹೆಚ್ಚಾಗಿ ಬೆಳೆದಿರುವುದಿಲ್ಲ . ಮಾಂಸವು ಮದ್ಯಮ ತರಗತಿಯದ್ದಾಗಿದ್ದು 2 ವರ್ಷಕ್ಕೆ ಇವುಗಳ ಬೆಳವಣಿಗೆ ಸಂಪೂರ್ಣವಾಗುತ್ತದೆ . ಫಾರಂ ನಲ್ಲಿ ಸಾಕಿದ ಕುರಿಗಳು ವರ್ಷಕ್ಕೆ 2 ಪೌಂಡ್ ನ ವರೆಗೂ ಉಣ್ಣೆಯನ್ನು ಕೊಡುತ್ತವೆ . ಸುಮಾರು 8 ರಿಂದ 10 ಕೆಜಿ ಯಸ್ಟು ಮಾಂಸವು ದೊರೆಯುತ್ತದೆ .
ಹಾಸನ ಕುರಿಗಳು.
ಈ ಕುರಿಗಳನ್ನು ಹಾಸನದ ಜಿಲ್ಲೆಯಲ್ಲಿ ಸಾಕುವುದರಿಂದ ಇವುಗಳನ್ನು ಹಾಸನದ ಕುರಿಗಳೆಂದೇ ಕರೆಯುತ್ತಾರೆ. ಇವು ಉಣ್ಣೆ ಮತ್ತು ಕೂದಲುಗಳಿಂದ ಮಿಶ್ರಿತವಾಗಿರುತ್ತವೆ . ಈ ಕುರಿಗಳು ಒರಟಾದ ತುಪ್ಪಟವನ್ನು ಹೊಂದಿರುತ್ತವೆ . ಇವು ಮೈ ಕಟ್ಟು ಮತ್ತು ಆಕಾರದಲ್ಲಿ ಬಹುಮಟ್ಟಿಗೆ ಡೆಕ್ಕನಿ ಮತ್ತು ಬಳ್ಳಾರಿ ಕುರಿಗಳನ್ನು ಹೋಲುತ್ತವೆ .ಈ ಕುರಿಗಳಿಗೆ ಹೋಲಿಸಿದರೆ ಹಾಸನ ಕುರಿಗಳು ಎತ್ತರದಲ್ಲಿ ಹಾಗು ದೇಹದಾಡ್ಯದಲ್ಲಿ ಸಣ್ಣದ್ದಾಗಿರುತ್ತವೆ . ಮಧ್ಯಮ ವರ್ಗದ ಕುರಿಗಳಾಗಿದ್ದು ಮುಕವು ಕಪ್ಪಗಿದ್ದು ಉಣ್ಣೆಯು ಬಿಳಿ ಬಣ್ಣದಿಂದ ಕೂಡಿರುತ್ತವೆ .ಈ ಉಣ್ಣೆಯನ್ನು ಸಹ ಕೇವಲ ಕಂಬಳಿ , ನೆಲ ಗಂಬಳಿ , ತಯಾರುಸುಲು ಉಪಯೋಗಿಸುತ್ತಾರೆ . ಇವುಗಳಿಂದ ದೇಹದ ತೂಕದ 60% ಮಾಂಸ ದೊರೆಯುತ್ತದೆ .
ಬನ್ನೂರು ಅಥವಾ ಮಂಡ್ಯ ಜಾತಿಯ ಕುರಿಗಳು
ಮಂಡ್ಯ ಜಾತಿಯ ಕುರಿಗಳು ಮಾಂಸಕ್ಕೆ ಹೆಸರುವಾಸಿಯಾದ ಕುರಿಗಳು . ಹೇಗೆ (ಬ್ರಿಟಿಷ್ ಸೌತ್ ಡೌನ್ ) ಕುರಿಗಳು ಬ್ರಿಟನ್ನಿನಲ್ಲಿ ಮಾಂಸಕ್ಕೆ ಹೆಸರುವಾಸುಯೋ ಹಾಗೆ ಮಂಡ್ಯದಕುರಿಗಳು ಭಾರತ ದಾದ್ಯಂತ ಮಾಂಸಕ್ಕೆ ಹೆಸರುವಾಸಿಯಾಗಿವೆ ಆದ್ದರಿಂದ ಇವುಗಳನ್ನು( ಇಂಡಿಯನ್ ಸೌತ್ ಡೌನ್ ) ಕುರಿಗಳೆಂದೇ ಕರೆಯುವುದು ವಾಡಿಕೆ . ಇವು ಉಣ್ಣೆಯ ಜಾತಿಯ ಕುರಿಗಳಲ್ಲ ಇವುಗಳ ಮೈ ಮೇಲಿನ ಕೂದಲು ಆಡುಗಳ ಕೂದಲಿಗಿಂತ ಸ್ವಲ್ಪ ಪ್ರಮಾಣ ಹೆಚ್ಚಿದ್ದು ಉಣ್ಣೆಯ ಉತ್ಪದಾನೆ ಕಮ್ಮಿಯೇ ಆಗಿದೆ . ಈ ಕುರಿಗಳ ತವರು ಮಂಡ್ಯ ಜಿಲ್ಲೆ , ಆದ್ದರಿಂದ ಈ ಕುರಿಗಳನ್ನು ಮಂಡ್ಯ ಜಾತಿಯ ಕುರಿಗಳೆಂದೇ ಕರೆಯುತ್ತಾರೆ, ಇವುಗಳ ಮೂಲ ಸ್ಥಳ ಮಂಡ್ಯ ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ , ಬನ್ನೂರು ಗ್ರಾಮವೇ ಈ ಕುರಿಗಳ ಮೂಲ ಸ್ಥಾನ . ಈ ತಳಿಯು ಅಳಿವಿನ ಅಂಚಿನಲ್ಲಿದ್ದು ರೈತರು ಮಂಡ್ಯ ಜಿಲ್ಲೆಯಲ್ಲಿ ಈ ತಳಿಯ ಕುರಿಯನ್ನು ಮಾಂಸದ ಉದ್ದೇಶಕ್ಕಾಗಿ ಮಾರದೆ ತಳಿ ಅಭಿವೃದ್ದಿಗಾಗಿ ಮಾರುವುದು ಉಂಟು ,
ಮಂಡ್ಯ ತಳಿಯ ಕುರಿಗಳು ಮಾಂಸಕ್ಕೆ ಹೆಸರುವಾಸಿಯಾಗಿದ್ದು , ಇದರ ಮಾಂಸವು , ಕೊಬ್ಬು , ಸುವಾಸನೆ , ಮೃದುತ್ವ , ಮತ್ತು ರಸಭರಿತವಾಗಿದ್ದು , ತನ್ನದೇ ಆದ ವೈಶಿಷ್ಟ್ಯ ವನ್ನು ಹೊಂದಿದೆ , ಭಾರತದ ಬೇರೆ ಯಾವುದೇ ಜಾತಿಯ ಕುರಿಗಳು ಈ ವಿಷಯದಲ್ಲಿ ಬನ್ನೂರು ಕುರಿಯನ್ನು ಸರಿಗಟ್ಟಲಾರವು.
ಈದರಲ್ಲಿ ಮಾಂಸವು ಕುರಿಯ ದೇಹದ 80% ರಸ್ಟು ಇರುತ್ತದೆ
ಆಕಾರದಲ್ಲಿ ಇವು ಮೈ ತುಂಬಿಕೊಂಡು ಇರುವುದಲ್ಲದೆ ಕೊಬ್ಬು ಬೆಳೆದಿರುತ್ತವೆ , ಇವು ಬಳ್ಳಾರಿ ಮತ್ತು ನೆಲ್ಲೂರು ಕುರಿಗಳಿಗಿಂತ ಎತ್ತರದಲ್ಲಿ ಕಮ್ಮಿ ಇರುತ್ತವೆ ಇವು ನೋಡಲು ಸುಂದರವಾಗಿದ್ದು ಮುದ್ದಾಗಿಯೂ ಇರುತ್ತವೆ , ಈ ಜಾತಿಯ ಕುರಿಯನ್ನು ಬೇರೆ ಜಾತಿಯ ಕುರಿಗಳಂತೆ ಬಯಲು ಪ್ರದೇಶ , ಹಾಗು ಗುಡ್ಡಗಾಡು ಗಳಲ್ಲಿ ತಿರುಗಾಡುತ್ತ ಮೇಯಿಸಲಾಗುವುದಿಲ್ಲ , ಇವು ಮನೆಯಲ್ಲೇ , ಕೊಟ್ಟಿಗೆ ಪದ್ದತಿಯಲ್ಲಿ ಬೆಳೆಸಲು ಸೂಕ್ತ ತಳಿಯಾಗಿದೆ ಇವಕ್ಕೆ ನೆವಿನ್ಸ್ ಜೊತೆಗೆ ಕೈ ತಿಂಡಿಯನ್ನು ಕೊಟ್ಟು ಉತ್ಕ್ತುಷ್ಟವಾಗಿ ಬೆಳೆಸಬೇಕಾಗುತ್ತದೆ ,