ಕೃಷಿ ತ್ಯಾಜ್ಯಗಳನ್ನು ಹಾಗು ಕಳೆಗಳನ್ನು ಮಾರಕವೆನ್ನುವಂತೆ ಅಂದುಕೊಳ್ಳೋ ರೈತರು ಅದರ ಅನುಕೂಲಗನ್ನು ಯಾಕೆ ತಿಳಿಯೊದಿಲ್ಲ .?
ಯಾವುದನ್ನು ಸಂಪತ್ತು ಎಂದು ಪರಿಗಣಿಸಬೇಕೋ ಅಂತಹದ್ದನ್ನೆಲ್ಲ ಆಪತ್ತು ಎಂದು ಪರಿಗಣಿಸುವುದು ನಮ್ಮ ಜ್ಞಾನದ ಮಿತಿಯಾಗಿದೆ. ಆಳವಾದ ಉಳುಮೆ ಮಾಡಿ, ಕಸಕಡ್ಡಿಗಳನ್ನು ಸುಟ್ಟು ಹಾಕಿ, ಬದುಗಳನ್ನು ಸ್ವಚ್ಛವಾಗಿರಿಸಿ ಎಂಬುದೊಂದು ದಶಕಗಳಿಂದ ಅನುರಣಿಸುತ್ತಿರುವ ಕೃಷಿ ಸಂದೇಶ. ವಾಸ್ತವಿಕವಾಗಿ ಕಳೆಗಳಿಂದ ಏನೂ ಹಾನಿ ಇಲ್ಲ. ಮಣ್ಣಿನಿಂದ ಕೇವಲ 60 ಗ್ರಾಂ, ಪೋಷಕಾಂಶಗಳನ್ನು ಹೀರಿಕೊಂಡು 75 ಕೆ.ಜಿ. ಜೀವರಾಶಿಯ (ಬಯೋಮಾಸ್ನ್ನು ಉತ್ಪಾದಿಸುವ ಕಳೆಗಳು, ಬಿಸಿಲು-ಗಾಳಿಯಿಂದ ಆಗುವ ತೇವಾಂಶದ ನಷ್ಟವನ್ನು\ ತಡೆಗಟ್ಟುತ್ತವೆ. ಜೊತೆಗೆ ತಾವೂ ವಿಘಟನೆಗೊಂಡು ಅನ್ನದ್ರವ್ಯಗಳ ಉತ್ಪತ್ತಿಗೆ ಅರ್ಪಿಸಿಕೊಳ್ಳುತ್ತವೆ.
ಇದನ್ನು ಓದಿ : ಈ ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಬೆಕ್ಕಿನಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು
ನಿಯಂತ್ರಿಸಬೇಕಾದುದನ್ನು ನಿರ್ನಾಮ ಮಾಡಲು ಹೋಗಿ ನಾವು ಎಡವಟ್ಟು ಮಾಡಿಕೊಳ್ಳುತ್ತೇವೆ. ನಮ್ಮ ಚಿಂತನಾ ಕ್ರಮಗಳಿಗೆ ತಕ್ಕಂತೆ, ನವನವೀನ ಕಳೆನಾಶಕಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ; ಕಳೆಗಳು ಹುಟ್ಟದಂತೆ ನಿರ್ಬಂಧಿಸುವ ಹತ್ತಿ ಬೀಜದ ಆವಿಷ್ಕಾರದ ವ್ಯರ್ಥ ಪ್ರಯತ್ನ ಹಾಗೂ ಮಿಥ್ಯ ಪ್ರಚಾರವೂ ವರ್ಷಗಳ ಹಿಂದೆ ಭರಾಟೆಯಿಂದ ಜರುಗಿತ್ತು ನಮ್ಮ ಕಳೆಗಳನ್ನು, ಜಾನುವಾರುಗಳನ್ನು ಜೊತೆಗೆ ನಮ್ಮನ್ನೂ ನಾಶಪಡಿಸುವ ಷಡ್ಯಂತ್ರಗಳ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು.
ಸ್ವಯಂ ಅಧ್ಯಯನ ಹಾಗೂ ಸಸ್ಯಶಾಸ್ತ್ರಜ್ಞರೊಂದಿಗಿನ ಸಂವಾದದಿಂದ ಪಾಳೆಕರ, ಒಟ್ಟು 200 ಬಗೆಯ ಭೂಸುಧಾರಕ ಕಳೆಗಳನ್ನು ಗುರುತಿಸಿದ್ದಾರೆ. ನೈಸರ್ಗಿಕ ಕೃಷಿಯ ಅನುಷ್ಠಾನದಿಂದ ಹಾನಿಕಾರಕ ಕಳೆಗಳು ಸ್ವಯಂನಿಯಂತ್ರಣಗೊಂಡು ಉಪಕಾರಿ ಕಳೆಗಳು ವೃದ್ಧಿಗೊಂಡಿರುವುದನ್ನು ವಿಶದೀಕರಿಸಿದ್ದಾರೆ. ಕಳೆಗಳು ಬೀಜ ತಳೆಯುವ ಮುನ್ನ ಮುಚ್ಚಿಗೆಯಾಗಿ ಬಳಸಲ್ಪಟ್ಟರೆ ಅವೆಲ್ಲ ಕೃಷಿ ಉತ್ಪನ್ನಕ್ಕೆ ನೀಡುವ ಕೊಡುಗೆ, ಪರಿಣಾಮ, ಫಲಶೃತಿಗಳು ಪವಾಡಸದೃಶದ್ದಾಗಿದೆ.
ಇದನ್ನು ಓದಿ : ಮಳೆಗಾಲದಲ್ಲಿ ಕೃಷಿಕರು ಸಿಡಿಲಿನ ಬಗ್ಗೆ ತಿಳಿಯಬೇಕಾದ ಅನಾಹುತಗಳು ಹಾಗೂ ಮುಂಜಾಗ್ರತಾ ಕ್ರಮಗಳು .!
ಹತಾಶ ಮನಸ್ಥಿತಿಯ ರೈತರು ಈಚೆಗೆ ಬೆಳೆದು ನಿಂತ ಪೈರಿಗೆ ಬೆಂಕಿ ಇಡುತ್ತಿರುವುದು, ಜಾಗತಿಕ ತಾಪಮಾನದ ಏರಿಕೆಗೆ, ಉಪಕಾರಿ ಜೀವಜಂತುಗಳ ನಾಶಕ್ಕೆ ಅವಕಾಶ ನೀಡುತ್ತಿದೆ. ಭೂಮಿಯ ಮೇಲೆ ಮಾನವ ಎಸಗುತ್ತಿರುವ ಅತ್ಯಾಚಾರಕ್ಕೆ ಪ್ರತೀಕಾರ ತೀರಿಸಿಕೊಳ್ಳುವಂತೆ ಉತ್ತರ ಭಾರತದ ಉಷ್ಣಾಂಶ ಹಾಗೂ ತಮಿಳುನಾಡಿನ ಶತಮಾನದ ಮಳೆ ಪಾಠಕಲಿಸಿವೆ. ಭೂಮಿಯ ಹೊರಕವಚದ ಸರಾಸರಿ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್ ಇದ್ದು13.3 ರಿಂದ 14.6 ರ ನಡುವೆ ಬದಲಾಗುತ್ತಿರುತ್ತದೆ. ಶತಮಾನದಂಚಿಗೆ ಉಸ್ಕಾಂತ 18 ಡಿಗ್ರಿ ಸೆಲ್ಸಿಯಸ್‌ರಜ್ಞಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು 16 ಡಿಗ್ರಿ ಶಿಲ್ಪಿಯುಸ್‌ಪಷ್ಟಾದರೂ ಕೋಟ್ಯಂತರ ಜನರ ಬದುಕು ಅಯೋಮಯವಾಗಲಿದೆ. ಜಾಗತಿಕ ತಾಪಮಾನ ಸ್ಥಿರವಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಬದ್ಧತೆಯಾಗಬೇಕಿದೆ. ನೈಸರ್ಗಿಕ ಕೃಷಿ ಮಾತ್ರ ಈ ದಿಸೆಯಲ್ಲಿಕೆರವು ನೀಡಬಲ್ಲದು.