ಬೇವಿನ ಮರದ ಔಷಧಿಯ ಗುಣಗಳು ನಿಮಗೆ ಗೊತ್ತಾ . !
ಬರ್ಮಾ ಮೂಲದ ಬೇವಿನ ಮರವು ರಾಜ್ಯದ ಎಲ್ಲಾ ಬಗೆಯ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಸಾಲು ಮರವಾಗಿಯೂ ಸಹ ಇದನ್ನು ಅಲ್ಲಲ್ಲಿ ಬೆಳೆಸಲಾಗುತ್ತಿದೆ. ಬೇವಿನ ಸೊಪ್ಪು ಪೂಜಾವಸ್ತುವಾಗಿ ಮತ್ತು ಔಷಧಿಯಾಗಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಯುಗಾದಿಯಂದು ಬೆಲ್ಲದೊಡನೆ
ದೇವನ್ನು ತಿನ್ನುವುದು, ಜೀವನದಲ್ಲಿ ಸಿಹಿ ಕಹಿಯನ್ನು ಸಮಾನವಾಗಿ ಪರಿಗಣಿಸಬೇಕೆಂಬುದನ್ನು ಸಾಂಕೇತಿಕವಾಗಿ ಬಿಂಬಿಸುತ್ತದೆ. ಈ ಮರವು ಸುಮಾರು 30 ಅಡಿ ಎತ್ತರ ಬೆಳೆಯುತ್ತದೆ. ಸಂಯುಕ್ತ ರಿಯಲ್ಲಿ7-8ಜೊತೆ ಕಿರುಪತ್ರಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಉಪತ್ರಗಳು ಕುಡುಗೋಲಿನಂತೆ ಬಾಗಿರುತ್ತವೆ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಮರವು ಗೊಂಚಲು ರೂಪದಲ್ಲಿ ಸಣ್ಣಗಿರುವ ಬೆಳ್ಳಗಿನ ಹೂಗಳನ್ನು ಬಿಡುತ್ತದೆ. ಹೂಗಳಿಗೆ ಜೇನಿನಂತಹ ಸುವಾಸನೆಯಿರುತ್ತದೆ.
ಉಪಯೋಗಗಳು
1. ಬೇವಿನ ಚಕ್ಕೆಯ ಕಷಾಯಕ್ಕೆ ಶುದ್ಧಿಮಾಡಿದ ಪುಡಿ ಇಂಗನ್ನು ಹಾಕಿ ದಿವಸಕ್ಕೊಮ್ಮೆಯಂತೆ 1-2 ದಿವಸ ಕುಡಿಸಿ ಆನಂತರ ಹರಳೆಣ್ಣೆಯನ್ನು ಭೇದಿಗೆ ಕೊಡುವುದರಿಂದ ಜಂತುಹುಳುಗಳು ಬೀಳುತ್ತವೆ.
2. ಬೇವಿನ ತೊಗಟೆಯ ಕಷಾಯ 1 ಲೋಟ ತೆಗೆದುಕೊಂಡು ಅದಕ್ಕೆ 5 ಗುಂಜಿ ತೂಕ ಕಾಡುಜೀರಿಗೆ ಚೂರ್ಣ ಸೇರಿಸಿ ಕುಡಿಯುವುದರಿಂದ ಮಲೇರಿಯ ಜ್ವರ ವಾಸಿಯಾಗುತ್ತದೆ.
3. ಒಂದು ತೊಲ ಬೇವಿನ ತೊಗಟೆಯ ಚೂರ್ಣವನ್ನು ಮೇಕೆಯ ಹಾಲಿನಲ್ಲಿ ಕದಡಿ ನಿತ್ಯ ಬೆಳಗೆ 1-2 ವಾರ ಕುಡಿಯುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ.
4. ಬೇವಿನ ಪಂಚಾಂಗವನ್ನು (ಬೇರು, ತೊಗಟೆ, ಎಲೆ, ಹೂ, ಕಾಯಿ) ಸಮಪ್ರಮಾಣದಲ್ಲಿ ಕೂಡಿಸಿ ಬಾಣಲಿಯಲ್ಲಿ ಹಾಕಿ ಹುರಿದು ಕರಕುಮಾಡಿಕೊಂಡು ನಿತ್ಯ ಬೆಳಗ್ಗೆ ರಾತ್ರಿ ರಿಂದ ತೊಲ ಚೂರ್ಣವನ್ನು ತಣ್ಣೀರಿನಲ್ಲಿ ಕಲಸಿ ತಿನ್ನುತ್ತಾ ಇದೇ ಚೂರ್ಣವನ್ನು ಬೇವಿನ ಎಣ್ಣೆಯಲ್ಲಿ ಕಲಸಿ ಮುಲಾಮು ಮಾಡಿ ತೊನ್ನಿರುವ ಜಾಗದಮೇಲೆ ಲೇಪಿಸಬೇಕು. ಈ ಚಿಕಿತ್ಸೆಯನ್ನು 3-4 ತಿಂಗಳು ಮಾಡುವುದರಿಂದ ತೊನ್ನು ನಿವಾರಣೆಯಾಗುತ್ತದೆ.
5. ಬೇವಿನ ಪಂಚಾಂಗವನ್ನು ಚೂರ್ಣಮಾಡಿಕೊಂಡು ಬೇವಿನ ಎಣ್ಣೆಯಲ್ಲಿ ಕಲಸಿ ಹಾಲಿನೊಡನೆ ಸೇವಿಸುವುದರಿಂದ ಚರ್ಮವ್ಯಾಧಿಗಳು, ವಾತವ್ಯಾಧಿಗಳು, ಮೂತ್ರವ್ಯಾಧಿಗಳು ಮತ್ತು ನೇತ್ರರೋಗಗಳು ಗುಣವಾಗುತ್ತವೆ.
6. ಬೇವಿನ ಎಲೆಗೆ ಅರಿಸಿನ ಸೇರಿಸಿ ಅರೆದು ಮೈಗೆ ಹಚ್ಚಿಕೊಂಡು ಮಲಗಿದರೆ ಸೊಳ್ಳೆಗಳು ಕಡಿಯುವುದಿಲ್ಲ.
7. ಬೇದಿಗೆಪ್ಪ 3 ಭಾಗ, ಅರಿಸಿನ 3 ಭಾಗ ಮತ್ತು ಒಂದು ಭಾಗ ಎಳ್ಳನ್ನು ಸೇರಿ, ಡೇನುತುಪ್ಪದೊಡನೆ ಅರೆದು ವಣಗಳ ಮೇಲೆ ಲೇಪಿಸಿದರೆ ಬೇಗ ವಾಸಿಯಾಗುತ್ತವೆ,
8. ಬೇವಿನ ಎಲೆಯ ರಸ ಸುಮಾರು 12-24 ಮಿ.ಲೀ. ನಷ್ಟು ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ ಈ ಮಿಶ್ರಣವನ್ನು ಎರಡು ಭಾಗಮಾಡಿ 1 ಒಂದು ಭಾಗ ಮತ್ತು ಸಂಜೆ ಒಂದು ಭಾಗ ಹೀಗೆ ಕೆಲವು ದಿವಸ ಸೇವಿಸುವುದರಿಂದ ಕಾಮಾಲೆ ವಾಸಿಯಾಗುತ್ತದೆ. ಬೆಳಗ್ಗೆ
9. ಎಲೆಯ ರಸ ಸುಮಾರು 7-14 ಮಿ.ಲೀ. ತೆಗೆದುಕೊಂಡು ದಿವಸಕ್ಕೆರಡು ಬಾರಿ ಸೇವಿಸುವುದರಿಂದ ಪಿತ್ತಜನ್ಯ ಹೊಟ್ಟೆನೋವು ಗುಣವಾಗುತ್ತದೆ.
10. ಬೇವಿನಸೊಪ್ಪು ಕಡ್ಡಿ ಸಹಿತ ತಂದು ಒರಳಲ್ಲಿ ಕುಟ್ಟಿ ರಸ ಹಿಂಡಿಕೊಂಡು ಈ ರಸಕ್ಕೆ ಸಮಭಾಗ ಎಳ್ಳಣ್ಣೆಯನ್ನು ಸೇರಿಸಿ ಒಲೆಯ ಮೇಲಿಟ್ಟು ಬೇವಿನ ಕಟ್ಟಿಗೆಯ ಬೆಂಕಿಯಿಂದಲೇ ಕಾಯಿಸುತ್ತ ಬೇವಿನ ಕಡ್ಡಿಯಿಂದ ತಿರುವುತ್ತ ತೈಲಪಾಕ ಮಾಡಿಕೊಂಡು ಸೋಸಿ ಆರಿಸಿ ಸೀಸೆಯಲ್ಲಿ ತುಂಬಿಟ್ಟು ಕೊಳ್ಳಬೇಕು. ಈ ತೈಲಪಾಕವನ್ನು ಹೊತ್ತಿಗೆ ಒಂದು ತೊಲದಂತೆ ಎರಡು ಹೊತ್ತು ಪ್ಲೇಗಿನ ರೋಗಿಗೆ ಕುಡಿಸಬೇಕು ಮತ್ತು ಇದನ್ನೇ ಪ್ಲೇಗಿನ ಗಡ್ಡೆಗಳ ಮೇಲೆ ಲೇಷಿಸಬೇಕು.
11. ಬೇವಿನ ಚಿಗುರನ್ನು ನೀರಿನಲ್ಲಿ ನಯವಾಗಿ ಅರೆದು ತಣ್ಣೀರಿನಲ್ಲಿ ಕದಡಿ ಮಂತಿನಿಂದ ಕಡೆದು ಬಂದ ನೊರೆಯನ್ನು ಮೈಗೆ ಸವರುವುದರಿಂದ ಜ್ವರದಿಂದ ಬಂದ ಮೈಯುರಿ ಕಡಿಮೆಯಾಗುತ್ತದೆ ಮತ್ತು ಜ್ವರದ ತಾಪವೂ ಕಡಿಮೆಯಾಗುತ್ತದೆ.
12. ಹೂವಿನ ಕಷಾಯವನ್ನು ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳ ಹೊಟ್ಟೆ ಶುದ್ಧಿಯಾಗುತ್ತದೆ.
13. ಬೇವಿನ ಹೂಗಳನ್ನು ಒಣಗಿಸಿ ತಯಾರಿಸಿಕೊಂಡ ಚೂರ್ಣವನ್ನು ಪ್ರತಿದಿವಸ ಬೆಳಗ್ಗೆ ಜೇನುತುಪ್ಪದಲ್ಲಿ ನೆನೆಹಾಕಿ ರಾತ್ರಿ ಜೇನುತುಪ್ಪ ಸಹಿತ ತಿನ್ನುವುದರಿಂದ ದೇಹವು ಆರೋಗ್ಯ ಪೂರ್ಣವಾಗುವುದು.
14. ಬೇವಿನ ಬೀಜಗಳನ್ನು ಗೋಮುತ್ರದಲ್ಲಿ ಅರೆದು ತಲೆಗೆ ಬೆಳಗ್ಗೆ ಹಚ್ಚಿ ಸಂಜೆ ತಲೆ ತೊಳೆದುಕೊಳ್ಳುವುದರಿಂದ ಹೇನುಗಳು ನಾಶವಾಗುತ್ತವೆ. ಈ ಚಿಕಿತ್ಸೆಯನ್ನು ಒಂದು ವಾರ ನಡೆಸುವುದೊಳ್ಳೆಯದು. ಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿ 3-4 ಗಂಟೆ ಬಿಟ್ಟು ಸ್ನಾನ ಮಾಡುವುದರಿಂದಲೂ ತಲೆಯ ಹೇನುಗಳು ನಾಶವಾಗುತ್ತವೆ.
15. ಬೇವಿನ ಎಣ್ಣೆ ಲೇಪಿಸುವುದರಿಂದ ಗಜಕರ್ಣ ಗುಣವಾಗುತ್ತದೆ.
16. ಬೇವಿನ ಎಣ್ಣೆಯನ್ನು ಸಂಭೋಗಕ್ಕೆ ಮುನ್ನ ಲಿಂಗ ಮತ್ತು ಯೋನಿದ್ವಾರಕ್ಕೆ ಹಚ್ಚಿ ಸಂಭೋಗಿಸಿದರೆ ಗರ್ಭಧಾರಣೆಯಾಗುವುದಿಲ್ಲ. ಪಶುರೋಗ ಚಿಕಿತ್ಸೆಯಲ್ಲಿ
1. ಬೇವಿನ ತೊಗಟೆಯನ್ನು ಬಾಲದ ನೂತಿ ರೋಗದಲ್ಲಿ ಬಳಸುತ್ತಾರೆ. ಚಿಕಿತ್ಸಾ ಕ್ರಮಕ್ಕೆ ಕಣಿಗಿಲೆಗಿಡದ ಉಪಯೋಗಗಳನ್ನು ನೋಡುವುದು.
2. ಬೇವಿನ ಚಿಗುರೆಲೆಗಳನ್ನು ಅರೆದು ಅರಿಸಿನ ಮತ್ತು ಕೊಬ್ಬರಿಎಣ್ಣೆ ಸೇರಿಸಿ ಕಲಸಿ ಮೈಮೇಲೆ ಕಾಣಿಸಿಕೊಳ್ಳುವ ದಡಾರದ ಹುಣ್ಣಿಗೆ ಲೇಪಿಸುತ್ತಾರೆ.
3. ಬೇವಿನ ಚಿಗುರೆಲೆಯನ್ನು ನೆರಳಿನಲ್ಲಿ ಒಣಗಿಸಿ ಕುಟ್ಟಿ ಪುಡಿಮಾಡಿಕೊಂಡು ಕೊಂಬು ಮುರಿದು ರಕ್ತ ಸುರಿಯುತ್ತಿರುವ ಕಡೆ ಸಿಂಪಡಿಸುವುದರಿಂದ ರಕ್ತ ನಿಲ್ಲುವುದಲ್ಲದೆ ಗಾಯ ಬೇಗ ವಾಸಿಯಾಗುತ್ತದೆ.
4. ಬೇವಿನ ಚಿಗುರೆಲೆಯನ್ನು ಸುಟ್ಟು ಕರಕುಮಾಡಿ ಬೇವಿನ ಎಣ್ಣೆಯಲ್ಲಿ ಅರೆದು ಗಾಯದ ಮೇಲೆ ಲೇಪಿಸುವುದರಿಂದ ಕೀಡೆಗಳು ಸತ್ತು ಹೋಗುತ್ತದೆ.
5. ಬೇವಿನ ಸೊಪ್ಪು, ವಿಷಮಧಾರಿ ಸೊಪ್ಪು ಮತ್ತು ತುಂಬೆ ಸೊಪ್ಪನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಅರೆದು ತಕ್ಕಷ್ಟು ಪುಡಿ ಅರಿಸಿನ ಸೇರಿಸಿ ಕಲಸಿ ಮೈಗೆ ಲೇಪಿಸುವುದರಿಂದ ಉಣ್ಣೆಯ ಉಪಟಳ ಕಡಿಮೆಯಾಗುತ್ತದೆ.