ಮನುಷ್ಯನ ಹಾಗೂ ಸಾಕು ಪ್ರಾಣಿಗಳ ಆರೋಗ್ಯದ ದೃಷ್ಟಿಯಲ್ಲಿ ಭಂಗಿ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು
ಪರಿಚಯ
ಹಂಗಿಸೊಪ್ಪಿನ ತವರು ಮಧ್ಯ ಏಷ್ಯಾ, ಇದನ್ನು ಪರಿಹಾದ್, ಕುಹಾರ ಮುಂತಾದ ಕಡೆ ನಾರಿಗಾಗಿ ಬೆಳೆಸುತ್ತಾರೆ, ಪ್ರಾಕೃತಿಕವಾಗಿ ಈ ಗಿಡವು ದೊರೆಯುವುದಿಲ್ಲ, ಸರ್ಕಾರದಿಂದ ಅನುಮತಿ ಪಡೆದು ಇದನ್ನು ಬೆಳೆಸುತ್ತಾರೆ. ಅನುಮತಿಯಿಲ್ಲದೆ ಬೆಳೆಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕೆಲವು ಪದಸಾರಿ ಅಂಗಡಿಗಳಲ್ಲಿ ಈ ಮೂಲಿಕೆಯು ಔಷಧಿಗಾಗಿ ಮಾತ್ರ ದೊರೆಯುತ್ತದೆ, ಕೊಂಡು ತಂದು ಬಳಸಬಹುದು. ಈ ಮೂಲಿಕೆಯು 46 ಅಡಿ ಎತ್ತರ ಬೆಳೆಯುತ್ತದೆ. ನಾಲ್ಕು ಮೂಲೆಗಳಿರುವ ಕಾಂಡದ ಮೇಲೆ ಸರಳ ಎಲೆಗಳು ಪರ್ಯಾಯವಾಗಿ. ಜೋಡಣೆಯಾಗಿರುತ್ತವೆ. ಎಲೆಗಳು ಅಂಗೈ ಬೆರಳಿನಂತೆ ಸೀಳಿರುತ್ತವೆ.
ಗಂಡು ಹೂ ಮತ್ತು ಹೆಣ್ಣು ಹೂ ಬಿಡುವ ಗಿಡಗಳು ಬೇರೆ ಬೇರೆಯಾಗಿರು ಗಂಡುಹೂಗಳ ಪುಷ್ಪಮಂಜರಿ ಉದ್ದವಾಗಿರುತ್ತದೆ. ಹೆಣ್ಣು ಹೂಗಳು ಪುಸ್ತಕಗಳ ಗುಚ್ಚದಂತಿದ್ದು, ಎಲೆಯ ಕಂಕುಳಲ್ಲಿರುತ್ತದೆ. ಗಿರದ ಎಲ್ಲಾ ಭಾಗಗಳ ಮೇಲ ಗ್ರಂಥಿರೋಮಗಳಿರುತ್ತವೆ. ಅವುಗಳಿಂದ ಒಂದು ಬಗೆಯ ವಾರಕ್ಕೆ ಹೊಮ್ಮುತ್ತಿರುತ್ತದೆ.
ಉಪಯೋಗಗಳು
ಸೂಚನೆ : ಭಂಗಿಸೊಪ್ಪು ಮಾದಕ ವಸ್ತುವಾದುದರಿಂದ ಇದರ ಅತಿಯಾದ ಸೇವನೆಯಿಂದ, ಭ್ರಮೆ, ಅಸಂಬದ್ಧ ಪ್ರಲಾಪ, ದೃಷ್ಟಿ ಮಂಜಾಗುವುದು, ಚರ್ಮ ಒಣಗುವುದು ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ಕೆಲವೊಮ್ಮೆ ಉಸಿರಾಟದ ತೊಂದರೆ ಉಂಟಾಗಬಹುದು. ಆದುದರಿಂದ ಮಿತವಾಗಿ ವೈದ್ಯರ ಸಲಹೆಯಂತೆ ಉಪಯೋಗಿಸವುದೊಳ್ಳೆಯದು.
1. ಎಲೆಯ ರಸವನ್ನು ತಲೆಗೆ ಲೇಪಿಸುವುದರಿಂದ ತಲೆಯ ಹೊಟ್ಟು ಮತ್ತು ಹೇನು ಕಡಿಮೆಯಾಗುತ್ತವೆ.
2. ಎಲೆಯ ರಸವನ್ನು ಕಿವಿಗೆ ಹಾಕುವುದರಿಂದ ಕಿವಿಯಲ್ಲಿ ಹುಳು ಸೇರಿದ್ದರೆ ಸತ್ತು ಹೋಗುತ್ತವೆ.
3. ಎಲೆಯ ಚೂರ್ಣಕ್ಕೆ ಸಕ್ಕರೆ ಸೇರಿಸಿ ತುಪ್ಪದಲ್ಲಿ ಉರಿದು ಮೆಣಸಿನೊಡನೆ ತಿನ್ನಿಸುವುದರಿಂದ ಬಹಳ ದಿವಸದಿಂದ ಕಾಡುವ ಭೇದಿ ವಾಸಿಯಾಗುತ್ತದೆ.
4. ಎಲೆಯನ್ನು ಅರೆದು ಊತವಿರುವ ಜಾಗದ ಮೇಲೆ ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.
5. ಭಂಗಿಸೊಪ್ಪನ ಧೂಪ ಹಾಕಿ ದೂಪವು ಗುದದ್ವಾರಕೆ ತಾಗುವಂತೆ ಕುಳಿತುಕೊಳ್ಳುವುದರಿಂದ ಭಗಂದರ ಮತ್ತು ಮೂಲವ್ಯಾಧಿಯ ನೋವು ಶಮನವಾಗುತ್ತದೆ.
6. ಭಂಗಿಸೊಪ್ಪನ್ನು ಅಲ್ಪಪ್ರಮಾಣದಲ್ಲಿ ಸೇವಿಸುವುದರಿಂದ ಅಜೀಣ೯ ಮತ್ತು ಹೊಟ್ಟೆನೋವು ವಾಸಿಯಾಗುತ್ತದೆ.
7. ಎಲೆಯ ಚೂರ್ಣವನ್ನು ಗಾಯದ ಮೇಲೆ ಸಿಂಪಡಿಸುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
8. ಭಂಗಿಸೊಪ್ಪಿನ ಸೇವನೆಯಿಂದ ಕಫವು ಕಡಿಮೆಯಾಗಿ ಕೆಮ್ಮು ಗುಣವಾಗುತ್ತದೆ,
9. ಭಂಗಿಸೊಪ್ಪಿನ ಸೇವನೆಯಿಂದ ಮುಟ್ಟಿನ ದೋಷ ಪರಿಹಾರವಾಗುತ್ತದೆ.
10. ಭಂಗಿಸೊಪ್ಪಿನ ಸೇವನೆಯು ಕಾಮೋದ್ದೀಪನಗೊಳಿಸುತ್ತದೆ.
ಪಶುರೋಗ ಚಿಕಿತ್ಸೆಯಲ್ಲಿ
1. ಭಂಗಿಸೊಪ್ಪು ಮತ್ತು ತಪಸಿ ಮರದ ತೊಗಟೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಅರೆದು ಇಸಬು ಇರುವ ಕಡೆ ವಾಸಿಯಾಗುವವರೆಗೆ ಲೇಪಿಸಬೇಕು.
2. ಭಂಗಿಸೊಪ್ಪು ಮತ್ತು ತುಂಬೆಸೊಪ್ಪುಗಳನ್ನು ಅರೆದು ರಸ ತೆಗೆದು ಬಟ್ಟೆಯಲ್ಲಿ ಶೋಧಿಸಿ ದಿವಸಕ್ಕೆರಡು ಬಾರಿ ಕಣ್ಣಿಗೆ ಹಾಕುವುದರಿಂದ ಕಣ್ಣುನೋವು ಗುಣವಾಗುತ್ತದೆ.
3. ಭಂಗಿಸೊಪ್ಪು ಕಾಲು ಭಾಗಕ್ಕೆ ಮೂರು ಭಾಗ ತಪಸಿ ಸೊಪ್ಪು ಸೇರಿಸಿ ಅರೆದಿಟ್ಟುಕೊಂಡು ಗಂಡಾಮಾಲೆಯ ಗಂಟುಗಳಲ್ಲಿ ಕೀವು ತುಂಬಿದ್ದರೆ ಸೂಜಿಯಿಂದ ಚುಚ್ಚಿ ಕೀವನ್ನು ಹೊರತೆಗೆದು ಮೇಲಿನ ಔಷಧವನ್ನು ಲೇಪಿಸುವುದರಿಂದ ಗಂಡಾಮಾಲೆ (ಕೊರಳಬೇನೆ) ವಾಸಿಯಾಗುತ್ತದೆ.
4. ಭಂಗಿಸೊಪ್ಪು 10 ಗ್ರಾಂ, ಚಿತ್ರಮೂಲದ ಬೇರು ಎರಡು ಹಿಡಿ ಪ್ರಮಾಣ, ಇವೆರಡನ್ನೂ ನಿಂಬೆ ರಸದಲ್ಲಿ ಅರೆದು ನುಣ್ಣಗೆ ಗಂಧಮಾಡಿಕೊಂಡು ಮೂಗಿನ ಹೊಳ್ಳೆಯೊಳ್ಳಕ್ಕೆ ದಿವಸಕ್ಕೊಮ್ಮೆಯಂತೆ 2-3 ದಿವಸ ಲೇಪಿಸುವುದರಿಂದ ಪಿನಾಸಿ (ಸೊರಕು) ರೋಗ ವಾಸಿಯಾಗುತ್ತದೆ.